ಮೋದಿ ಪ್ರಮಾಣ ವಚನ ಸ್ವೀಕಾರ ವೇಳೆ ದೊಡ್ಡ ಅನಾಹುತ ತಪ್ಪಿತಾ.. ರಾಷ್ಟ್ರಪತಿ ಭವನದಲ್ಲಿ ಕಾಣಿಸಿತಾ ಕ್ರೂರ ಪ್ರಾಣಿ?

author-image
Bheemappa
Updated On
ಮೋದಿ ಪ್ರಮಾಣ ವಚನ ಸ್ವೀಕಾರ ವೇಳೆ ದೊಡ್ಡ ಅನಾಹುತ ತಪ್ಪಿತಾ.. ರಾಷ್ಟ್ರಪತಿ ಭವನದಲ್ಲಿ ಕಾಣಿಸಿತಾ ಕ್ರೂರ ಪ್ರಾಣಿ?
Advertisment
  • ಪ್ರಮಾಣ ವಚನ ಸ್ವೀಕಾರ ಮಾಡುವಾಗ ಕಾಣಿಸಿದ ಕಾಡು ಪ್ರಾಣಿ
  • ಹುಲಿನೋ, ಚಿರತೆನೋ ರಾಷ್ಟ್ರಪತಿ ಭವನದಲ್ಲಿ ಇನ್ನು ಇದೆಯಾ?
  • ದೊಡ್ಡ ಸಂಭ್ರಮದಲ್ಲಿ ಯಾವುದೇ ಹಾನಿ ಮಾಡದೇ ಹೋದ ಪ್ರಾಣಿ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಮೋದಿಯವರು ಅದ್ಧೂರಿಯಾದ ಸಂಭ್ರಮದಲ್ಲಿ 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದೇ ವೇಳೆ 72 ಸಂಸದರು ಕೂಡ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರಿಸಿದ್ದಾರೆ. ದೇಶ-ವಿದೇಶದ ಗಣ್ಯರು, ಉದ್ಯಮಿಗಳು, ಸಿನಿಮಾ ಸ್ಟಾರ್ಸ್ ಸೇರಿದಂತೆ 8,000 ಅತಿಥಿಗಳು ಸಮಾರಂಭಕ್ಕೆ ಆಗಮಿಸಿದ್ದರು. ಆದರೆ ಆಶ್ಚರ್ಯ ಎಂದರೆ ಈ ಕಾರ್ಯಕ್ರಮಕ್ಕೆ ಚಿರತೆಯೋ, ಹುಲಿಯೋ ಯಾವುದೋ ಒಂದು ಪ್ರಾಣಿ ಕೂಡ ಬಂದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಡಿವೋರ್ಸ್​ ಬಗ್ಗೆ ಸ್ಪಷ್ಟನೆ ಕೊಡ್ತಾರಾ ಚಂದನ್ ಶೆಟ್ಟಿ- ನಿವೇದಿತಾ.. ಇಂದು ಸಂಜೆ ಬಿಗ್ ಅಪ್​ಡೇಟ್​

ರಾಷ್ಟ್ರಪತಿ ಭವನದ ಭವ್ಯ ಆವರಣದಲ್ಲಿ ಆಹ್ವಾನಿಸದ ಅತಿಥಿಯೊಬ್ಬರು ಬಂದಿದ್ದು ಎಲ್ಲರಲ್ಲೂ ದಿಗ್ಭ್ರಮೆ ಉಂಟು ಮಾಡಿದೆ. ಬಿಜೆಪಿ ಸಂಸದ ದುರ್ಗಾ ದಾಸ್ ಅವರು ವೇದಿಕೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಅಧಿಕೃತ ಪತ್ರಗಳಿಗೆ ಸಹಿ ಹಾಕುವಾಗ ರಾಷ್ಟ್ರಪತಿ ಭವನದ ಬಾಗಿಲ ಬಳಿ ಒಳಗೆ ಪ್ರಾಣಿ ನಡೆದುಕೊಂಡು ಹೋಗುತ್ತಿರುವುದು ಕ್ಯಾಮೆರಾದಲ್ಲಿ ಕಾಣಿಸಿದೆ. ಈ ಪ್ರಾಣಿ ಚಿರತೆಯೋ ಅಥವಾ ಹುಲಿಯೋ ಆಗಿರಬಹುದು ಎಂದು ನೆಟ್ಟಿಗರು ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಸದ್ಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: MS ಧೋನಿಯನ್ನ ಹೊಗಳಿದ ರಿಷಬ್​ ಪಂತ್.. ಯಂಗ್ ಪ್ಲೇಯರ್ ಬಗ್ಗೆ ನಾಯಕ ರೋಹಿತ್ ಬೇಜಾರ್ ಆದ್ರಾ?


">June 10, 2024

ಇನ್ನು ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ವೇಳೆ ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ನಿಟ್ಟುಸಿರು ಬಿಡಲಾಗಿದೆ. ಏಕೆಂದರೆ ಒಂದು ವೇಳೆ ಕಾರ್ಯಕ್ರಮ ನಡೆಯುವ ವೇಳೆ ಆ ಕ್ರೂರ ಪ್ರಾಣಿ ಕಾರ್ಯಕ್ರಮಕ್ಕೆ ಬಂದಿದ್ದವರ ಮೇಲೆ ದಾಳಿ ಮಾಡಿತ್ತು ಎಂದರೆ ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಅದೃಷ್ಟವಶಾತ್ ಅದು ಯಾವುದೇ ದಾಳಿ ನಡೆಸದೇ ರಾಷ್ಟ್ರಪತಿ ಭವನದ ಒಳಗೆ ಹೋಗಿದೆ. ಹೀಗಾಗಿ ಇನ್ನು ಆ ಪ್ರಾಣಿ ಒಳಗೆ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment